
23rd February 2025
ಮಲ್ಲಮ್ಮ ನುಡಿ ವಾರ್ತೆ
ಯಾದಗಿರಿ :ಫೆ.22: ಪ್ರಸಕ್ತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ, ಕಾರಣ ಗ್ರಾಮೀಣ ಭಾಗದ ಜನರು ತಮ್ಮಮಕ್ಕಳಿಗೆ ತಪ್ಪದೇ ಗುಣಮಟ್ಟದ ಶಿಕ್ಷಣ ಒದಗಿಸಿ, ಅದರಿಂದ ಮಾತ್ರ ಅವರು ಮುಂದೆ ಗುರಿ ತಲುಪಿ,
ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಕಾಣಲೂ ಸಾಧ್ಯ ಎಂದು ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ಜಿಲ್ಲೆಯಹುಣಸಗಿ ತಾಲ್ಲೂಕಿನ ಮುದನೂರ (ಕೆ)ಗ್ರಾಮದ ಶ್ರೀ ದೇವರ ದಾಸಿಮಯ್ಯ ಶಿಕ್ಷಣ ಸಂಸ್ಥೆಯ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ನಡೆಸುವುದು
ಒಂದು ಸವಾಲಿನ ಕೆಲಸ,
ಉನ್ನತ ಸಂಸ್ಕಾರಮನೆತನದಲ್ಲಿ ಜನಿಸಿದ ಶಾಂತರಡ್ಡಿ ಚೌದ್ರಿ ಅವರು, ಇಂಜಿನಿಯರ್ ಪದವಿದರರು, ಬೇರೆ ಕಡೆ ಅವರಿಗೆ ಕೆಲಸ ಮಾಡಲು ಲಕ್ಷಾಂತರ ರೂ.ಹಣ ವೇತನ ಸಿಗುತ್ತಿತ್ತು, ಆದರೆ ಅವರು ಶೈಕ್ಷಣಿಕ ಹಿಂದುಳಿದರುವ ತಮ್ಮ ಭಾಗದಲ್ಲಿ ಕನ್ನಡದ ಆಧ್ಯ ವಚನಕಾರ ದೇವರ
ದಾಸಿಮಯ್ಯ ಅವರ ಹುಟ್ಟೂರು ಸಹ ಇದೆ ಗ್ರಾಮವಾಗಿದೆ.ಅವರ ಹೆಸರಿನಲ್ಲಿ 1995ರಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಕನ್ನಡ ಮಾಧ್ಯಮದಲ್ಲಿಹೈಸ್ಕೂಲ್ವರೆಗೆ ವಿಧ್ಯಾರ್ಥಿಗಳಿಗೆ ವಿಧ್ಯಾದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು
400
ಹೇಳಿದರು.
ಜಿ.ಪಂ ಮಾಜಿಸದಸ್ಯಹೆಚ್.ಸಿ
ಪಾಟೀಲ್ ರಾಜನಕೋಳೂರ
ಮಾತನಾಡಿ,ಯಾವುದೇ ವ್ಯಕ್ತಿ ಸಾಧನೆಮಾಡಬೇಕಾದರೆಮೊದಲು
ಆಸಕ್ತಿ, ಶ್ರದ್ಧೆ, ಛಲ, ನಿರಂತರ ಪರಿಶ್ರಮ ಹೊಂದಿರಬೇಕು, ಆದಿಶೆಯಲ್ಲಿ ಚೌದ್ರಿಯವರು ಅನೇಕ ಕಷ್ಟಗಳ ಮದ್ಯೆ 15 ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿ, ಹಲವಾರು ವಿಧ್ಯಾವಂತರಿಗೆ ಶಿಕ್ಷಕ ಪವಿತ್ರ ಕೆಲಸ ನೀಡುವ ಜೊತೆಗೆ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ, ಇಲ್ಲಿ ಅಭ್ಯಾಸ ಮಾಡಿದ ವಿಧ್ಯಾರ್ಥಿಗಳು ಹಲವಾರು
ಕ್ಷೇತ್ರಗಳಲ್ಲಿ ಗುರಿ ತಲುಪಿ ಶಾಲೆಗೆ ತರಲೀ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತರಡ್ಡಿಚೌದ್ರಿಅಧ್ಯಕ್ಷತೆವಹಿಸಿ
ಮಾತನಾಡಿ, ನಾನು ಬದುಕಿನಲ್ಲಿ ಕಷ್ಟಗಳೇ ಬದುಕಿನ ಜೀವಂತ ಲಕ್ಷಣಗಳು ಎಂದು ಅರಿತು ಎಲ್ಲರ ಸಹಕಾರದಿಂದ ಈ ಭಾಗದಲ್ಲಿ ಶೈಕ್ಷಣಿಕ
ಬದಲಾವಣೆಗೆ ನಿರಂತರ ಕೆಲಸ
ಮಾಡುತ್ತಿದ್ದೇನೆ, ಇದರಿಂದ ನನಗೆ ಆತ್ಮತೃಪ್ತಿ ಇದೆ, ನನ್ನ ಬದುಕಿನ ಇನ್ನೊಂದು ಮಹತ್ವದ ಕೆಲಸ ದೇವರ ದಾಸಿಮಯ್ಯ ಕ್ಷೇತ್ರವನ್ನು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಯಾಗಿ ನೋಡುವುದೇನನ್ನಕನಸಾಗಿದೆ, ಜನಪ್ರತಿನಿಧಿಗಳು,ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ, ಕೆಲಸ ಮಾಡಿದಾಗ ಮಾತ್ರ ನಮ್ಮ ಗ್ರಾಮ ರಾಜ್ಯದ ಗಮನ ಸೆಳೆಯುತ್ತದೆ ಎಂದುಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು
ಹಂಚಿಕೊಂಡರು.
ಇಂದು
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ದೇವಾಪೂರದ ಜಡಿ ಶಾಂತಲಿಂಗೇಶ್ವರ ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿ, ನಾವೂ ಅನೇಕ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೆಲವರು ಆರಂಭಿಸಿ ಸರ್ಕಾರದಿಂದ ಹಾಗೂ ಖಾಸಗಿ ಸಾಕಷ್ಟು ಹಣ ಸಂಪಾದಿಸಿರುವುದನ್ನು ಕಂಡಿದ್ದೇವೆ. ಆದರೆ ಇಲ್ಲಿ ಚೌದ್ರಿಯವರು ತಮ್ಮ ಸ್ವ- ಂತ 15 ಎಕರೆ ಜಮೀನನ್ನು ಮಾರಾಟ ಮಾಡಿ ಉತ್ತಮ ಶಾಲೆ ನಿರ್ಮಾಣ ಮಾಡಿ, ಎಲ್ಲಾ ವರ್ಗದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಿ, ಶಿಕ್ಷಣ ಒದಗಿಸುತ್ತಿರುವ ಕಾರ್ಯ ನಾವೂ ರಾಜ್ಯದಲ್ಲಿ ಬೇರೆಲ್ಲೂ ಕಾಣಲೂ ಸಾಧ್ಯವಿಲ್ಲ ಎಂದು
ನುಡಿದರು.
ಕಾರ್ಯಕ್ರಮದಲ್ಲಿ ರಜತ ಮಹೋತ್ಸವದ ಜ್ಞಾನಸಿರಿಯ ತವನಿಧಿಸ್ಮರಣ ಸಂಚಿಕೆ-2025
ಬಿಡುಗಡೆ ಮಾಡಲಾಯಿತು.
ವೇದಿಕೆ ಮೇಲೆ ಕೋರಿ
ಸಿದ್ದೇಶ್ವರ ಕಂಠಿ ಮಠದ ಸಿದ್ಧ ಚನ್ನಮಲ್ಲಿಕಾರ್ಜುನಸ್ವಾಮಿಜಿ, ಕೂಡ್ಲಿಗಿಯ ಬಾಬಾ ಮಠದ ಮೃತ್ಯುಂಜಯ, ಕೆಂಭಾವಿ ಹಿರೇಮಠದ ಚನ್ನಬಸವ ಸ್ವಾಮಿಜಿ,ಸಣ್ಣಕೆಪ್ಪ ಬಂಡೆಪ್ಪನಳ್ಳಿ, ಬಸಯ್ಯ ಸೋಮಶೇಖರ ಮಠ ಯಾಳಗಿ, ಗಿರಿಧರ
ರಾಜ್ಯ ಶಿವಾಚಾರ್ಯ ಹಿರೇಮಠ
ಮುದನೂರ,
ಬಬ್ದುಗೌಡ, ಸುರೇಶ ಸಜ್ಜನ್, ವಿಶ್ವನಾಥರಡ್ಡಿದರ್ಶನಾಪೂರ, ರಾಜಾ ಮುಕುಂದ ನಾಯಕ, ಪ್ರಕಾಶ ಅಂಗಡಿ, ರವೀಂದ್ರ ಕೊಡೆಕಲ್, ವಿರೇಶ ನಿಷ್ಟೆ, ಜಯಲಲೀತಾ ಪಾಟೀಲ್, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನರಡ್ಡಿಹತ್ತಿಕುಣಿ, ಡಿ.ಸಿ ಪಾಟೀಲ್ ಕೆಂಭಾವಿ, ಕೃಷ್ಣಾರೆಡ್ಡಿ, ಮುಖ್ಯಗುರುಗಳಾದ ಮಹೇಶ ತಾತರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೇವು ಜಾದವನಿರೂಪಿಸಿದರೆ, ರಮೇಶಹೂವಿನಹಳ್ಳಿಸ್ವಾಗತಿಸಿದರು, ವಿಜಯಕುಮಾರ ಕರೆಕಲ್ ವಂದಿಸಿದರು.
ನಂತರಶಾಲಾವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ಆಕರ್ಷಿಸಿತು.
undefined
ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಜನಪದ ಸಾಹಿತ್ಯದ ತಾಯಿ ಬೇರು: ಹಮೀದಾ ಬೇಗಂ ದೇಸಾಯಿ ಪೃಥ್ವಿ ಫೌಂಡೇಶನ್ ದಿಂದ " ಜಾನಪದ ಸಂಭ್ರಮ" ಕಾರ್ಯಕ್ರಮ
ಗಣಿತ ವಿಜ್ಞಾನದ ತಾಯಿ ಬೇರು : ಪ್ರಾಚಾರ್ಯ ಎಂ. ಜಿ. ಹೆಗಡೆ ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಭಿಪ್ರಾಯಪಟ್ಟರು.
ಎಂ.ಕೆ. ಹುಬ್ಬಳ್ಳಿಯ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ವಿಶೇಷವಾಗಿ ಆಚರಣೆ